Sunday, August 14, 2016

ಸಾಣೀಹಳ್ಳಿಯಲ್ಲಿ ಸ್ವಚ್ಫತಾ ಅಭಿಯಾನ 14-08-2016

ಸಾಣೇಹಳ್ಳಿಯಲ್ಲಿ ಸ್ವಚ್ಫತಾ ಅಭಿಯಾನ

ಶ್ರೀಮಠದ ಶಾಲೆಯ ಮಕ್ಕಳು ಸ್ವತಂತ್ರ ದಿವಸದ ಮುನ್ನದಿನವಾದ ಇಂದು ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಪ್ರಧಾನಮಂತ್ರಿ ನರೇಂದ್ರಮೋದಿಯವರ ಸ್ವಚ್ಛಭಾರತ ಅಭಿಯಾನದ ಕಲ್ಪನೆ ಹಾಗೂ ಡಾ|| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳವರ ಆಶಯದಂತೆ ಸಾಣೇಹಳ್ಳಿಯ ಬೀದಿಗಳು, ಆಸ್ಪತ್ರೆಯ ಆವರಣ, ಊರ ಹೊರಗಿನ ರಸ್ತೆಗಳ ಇಕ್ಕೆಲಗಳಲ್ಲಿ ಸ್ವಚ್ಛತಾಕಾರ್ಯ ಕೈಗೊಂಡರು. ಶ್ರೀ ಗುರುಪಾದೇಶ್ವರ ಪ್ರಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮಿಜಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಏಳನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ತಲಾ 50 ವಿದ್ಯಾರ್ಥಿಗಳಿಗೊಂದರಂತೆ 14 ತಂಡಗಳನ್ನು ರಚಿಸಲಾಗಿತ್ತು. ಒಂದೊಂದು ತಂಡಕ್ಕೂ ಮೂರು ಜನ ಶಿಕ್ಷಕರು ಮತ್ತು ಒಬ್ಬರು ಗ್ರಾಮಸ್ಥರನ್ನು ನಿಯೋಜಿಸಲಾಗಿತ್ತು. ಮೂರು ಟ್ರ್ಯಾಕ್ಟರ್ ಗಳನ್ನು ಬಳಸಿಕೊಂಡು ಗ್ರಾಮದ ಬೀದಿಗಳ ಇಕ್ಕೆಲಗಳಲ್ಲಿ ಬೆಳೆದಿದ್ದ ಪಾರ್ಥೇನಿಯಂ, ಜಾಲಿ ಮುಂತಾದ ಗಿಡಗಳನ್ನು ಕಿತ್ತು ಹಾಕಲಾಯಿತು. ಪ್ಲಾಸ್ಟಿಕ್, ಕಸ ಮುಂತಾದವು ಸೇರಿದಂತೆ ಸುಮಾರು 7-8 ಟ್ರ್ಯಾಕ್ಟರ್ ಆಯ್ದು ಊರ ಹೊರಗಿನ ದೊಡ್ಡ ಗುಂಡಿಗೆ ಹಾಕಲಾಯಿತು. ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದನ್ನು ಕಂಡ ಗ್ರಾಮಸ್ಥರು ತಾವು ಕೈಜೋಡಿಸಿದ್ದಲ್ಲದೆ ಇನ್ನುಮುಂದೆ ವಿದ್ಯಾರ್ಥಿಗಳು ಬಂದು ಸ್ವಚ್ಛಮಾಡಲು ಅವಕಾಶ ಮಾಡಿಕೊಡದಂತೆ ನಾವೆ ನಮ್ಮ ನಮ್ಮ ಮನೆಯ ಮುಂದಿನ ರಸ್ತೆಗಳನ್ನು ಸ್ವಚ್ಛಮಾಡುವುದಾಗಿ ಹೇಳಿದರು. ಒಟ್ಟಾರೆ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಅಭಿಯಾನ ಯಶಸ್ವಿಯಾಯಿತು. ಈ ಸ್ವಚ್ಛತಾ ಅಭಿಯಾನದಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಸಾಣೇಹಳ್ಳಿ ಗ್ರಾಮಪಂಚಾಯಿತಿಯ ಸದಸ್ಯರು, ಯುವಕರು, ಹಿರಿಯರು, ಶಾಲಾಕಾಲೇಜುಗಳ ಅಧ್ಯಾಪಕರು, ನೌಕರರು ಭಾಗವಹಿಸಿದ್ದರು.
-     



 

No comments:

Post a Comment