Monday, July 24, 2017

shravana sanje program in abaluru 24-07-2017

`ಶ್ರಾವಣ ಸಂಜೆ’ - ಅಬಲೂರು

ಹಿರೇಕೇರೂರು ತಾ, ಅಬಲೂರು, ಜು 24; ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ  `ಶ್ರಾವಣ ಸಂಜೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಧಾರ್ಮಿಕ ಸದ್ಭಾವನೆ, ಸಂಘಟನೆ, ಒಂದಾಗಿ ಬಾಳಬೇಕು ಎನ್ನುವ ಭಾವನೆ ಇನ್ನೂ ಗ್ರಾಮಸ್ಥರಲ್ಲಿ ಇದೆ. ಗ್ರಾಮದ ಮುಖಂಡರು ಜವಬ್ದಾರಿಯರಿತು, ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯವನ್ನು ಬೆರೆಸದೆ ಕೆಲಸ ಮಾಡುವ ಅವಶ್ಯಕತೆ ಇದೆ. ಎಳೆವಯಸ್ಸಿನಲ್ಲಿ ಮಕ್ಕಳು ವಚನಗಳನ್ನು ಕಲಿತರೆ ವಚನ ಸಂಸ್ಕøತಿ ಮುಂದುವರಿಯುವಲ್ಲಿ ಸಹಕಾರಿಯಾಗುವುದು. 12 ನೆಯ ಶತಮಾನದ ಶರಣರು ಮತ್ತು 16 ನೆಯ ಶತಮಾನದ ಸರ್ವಜ್ಞರ ಸಾಹಿತ್ಯದ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರೂ ಸಮಾಜವನ್ನು ನೋಡಿದ ರೀತಿ, ತಿದ್ದುವ ಪ್ರಯತ್ನ ಒಂದೇ ಆಗಿವೆ. ಸರ್ವಜ್ಞ `ಹೇಡಿಂಗೆ ಹಿರಿತನ, ಮೂಢಂಗೆ ಗುರುತನ, ನಾಡ ನೀಚಂಗೆ ದೊರೆತನ ದೊರೆಯಬಾರದು’ ಎಂದು ಹೇಳುವ ಮೂಲಕ ನಾಡಿನ ಸ್ವಾಸ್ಥ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಬಹು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಈ ಮಾತಿನ ಆಶಯದಂತೆ ಮನೆ, ಮಠ ಮತ್ತು ನೇತಾರರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸರ್ವಜ್ಞನ ತಿಳುವಳಿಕೆ ಇಂದಿನ ರಾಜಕಾರಣಿಗಳಿಗೆ ಇದ್ದಿದ್ದರೆ ರೈತರಿಗೆ ಏನು ಬೇಕು ಎನ್ನುವ ತಿಳುವಳಿಕೆ ಮೂಡುತ್ತಿತ್ತು. ಸಂತರು ಮತ್ತು ಶರಣರು ಇನ್ನೊಬ್ಬರಿಗೆ ಹೇಳುವ ಮುನ್ನ ತಾವು ಅನುಷ್ಠಾನಕ್ಕೆ ತಂದವರು, ಪsÀರ ಧನ, ಪರ ಸ್ತ್ರೀ, ಪರ ದೈವ ಗಳನ್ನು ಒಲ್ಲೆನೆಂಬ ಛಲ ಬೆಳೆಸಿಕೊಂಡವರು. ಅವರ ನಡವಳಿಕೆ ನಮ್ಮಲ್ಲಿ ಅಳವಡಬೇಕು ಆಗ ಮಾತ್ರ ಸಮಾಜದಲ್ಲಿ ಏನೇ ಸಂಕಷ್ಟಗಳು ಬಂದರೂ ಸಮರ್ಥವಾಗಿ ನಿರ್ವಹಿಸಬಹುದು. ಇಂದಿನ ಶಿಕ್ಷಣದಲ್ಲಿ ಅರಿವಿದೆ ಆಚಾರವಿಲ್ಲ. ಇಂಥ ಶಿಕ್ಷಣ ತುಂಬ ಅಪಾಯಕಾರಿಯಾದುದು. ಮಕ್ಕಳಿಗೆ ಸರಿಯಾದ ಸಂಸ್ಕಾರ ಕೊಡದಿದ್ದರೆ ಆ ಮಕ್ಕಳ ಪೋಷಕರು, ಪಾಠ ಹೇಳಿದ ಶಿಕ್ಷಕರು, ಸೂಕ್ತ ವಾತಾವರಣ ದೊರಕಿಸದ ಸಮಾಜದ ಮುಖಂಡರು ಮಕ್ಕಳಿಗೆ ಶತೃಗಳಾಗುವರು. ನಡೆದಂತೆ ನುಡಿದ ಸರ್ವಜ್ಞ ಬಹು ದೊಡ್ಡ ಬಂಡಾಯಗಾರರು. ಇಂದಿನ ಬಂಡಾಯ ಸಾಹಿತಿಗಳು ತಾವು ಬರೆದಂತೆ ನಡೆದುಕೊಳ್ಳದಿರುª ಕಾರಣ ಅವರ ಮಾತುಗಳಿಗೆ ಬೆಲೆಯಿಲ್ಲದಂತಾಗಿದೆ. ಪ್ರತಿಯೊಬ್ಬರೂ ಶೌಚಾಲಯಗಳನ್ನು ಕಟ್ಟಿಸಿಕೊಂಡು ಅದನ್ನು ಬಳಸುವ ಸಂಕಲ್ಪ ಮಾಡಬೇಕು. ಅದರಂತೆ ನಡೆದುಕೊಂಡರೆ ಶ್ರಾವಣ ಸಂಜೆ ಕಾರ್ಯಕ್ರಮ ಸಾರ್ಥಕವಾಗುವುದು ಎಂದರು.         
ಶರಣರ ಆಚಾರ ಸಂಹಿತೆಯ ಪ್ರಸ್ತುತತೆ ಕುರಿತು ದಾವಣಗೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಪ್ರಕಾಶ್ ಹಲಗೇರಿ `ಶರಣರ ಆಚಾರ ಸಂಹಿತೆ’ ಕುರಿತಂತೆ ಮಾತನಾಡಿ `ಶ್ರಾವಣ ಸಂಜೆ’ ಕಾರ್ಯಕ್ರಮ ಕರ್ನಾಟಕದ ಸಾಂಸ್ಕøತಿಕ ಹಬ್ಬ. ಬಸವಾದಿ ಶರಣರು ನಿರ್ಮಾಣ ಮಾಡಿದ ಸಮಾಜ ಸಮಪಾತಳಿಯ ಸಮಾಜ. ಶರಣರ ಆಲೋಚನೆಗಳು ಜಾಗತಿಕ ಮಟ್ಟದಲ್ಲಿ ಆಚರಿಸುವಂಥವು. ಆದರೆ ಕನ್ನಡಿಗರ ನಿರಭಿಮಾನ, ಜಾತಿಯ ಸಂಕೋಲೆಗಳನ್ನು ತೊಡಿಸಿರುವುದು ದುರಂತದ ಸಂಕೇತ. ಜಗತ್ತಿನ ಅನ್ಯ ಧರ್ಮಗಳಲ್ಲಿ ಮಿತಿಗಳಿವೆ. ಆದರೆ ಬಸವ ಧರ್ಮಕ್ಕೆ ಯಾವುದೇ ಮಿತಿಗಳಿಲ್ಲ. ಶರಣರ ಸಂದೇಶಗಳು ಮೊದಲು ತಮ್ಮನ್ನು ತಾವು ಪರೀಕ್ಷಿಸಿಕೊಂಡಿರುವಂಥವು. ಅವು ಇನ್ನೊಬ್ಬರಿಗೆ ಹೇಳಲು ಮಾತ್ರ ಇರುವಂಥವಲ್ಲ. ರಾಜಕೀಯ, ಧಾರ್ಮಿಕ, ಸಾಮಾಜಿಕ ಅಸಡ್ಢಾಳತನದಿಂದಾಗಿ ಅತ್ಯಾಚಾರ, ಹತ್ಯಾಚಾರ, ಭ್ರಷ್ಟಾಚಾರಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಕೇವಲ ಹತ್ತು-ಇಪ್ಪತ್ತು ಸಾವಿರ ಸಾಲಕ್ಕಾಗಿ ಅತ್ಮಹತ್ಯೆ ಮಾಡುಕೊಳ್ಳುತ್ತಿರುವುದು ಭಾರತದ ಜ್ಞಾನವನ್ನ, ತಿಳುವಳಿಕೆಯನ್ನ ಅಣಕವಾಡುವಂತಿವೆ. ಇಂದು ನಮ್ಮ ದೇಶದಲ್ಲಿ ಸತ್ಯದ ಪ್ರಮಾಣ ಶೇ. ಒಂದಕ್ಕಿಂತ ಕಡಿಮೆ! ಸಾಮಾಜಕಿವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ ಸಾಮಾನ್ಯರಿಂದ ದೂರವಾಗಿದ್ದ ಆಚಾರ ಸಂಹಿತಿಯನ್ನು ವಚನಗಳ ಮೂಲಕ ಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋದರು. ತೋರ್ಪಡಿಕೆಯ ಭಕ್ತಿಯನ್ನು, ಆಚರಣೆಗಳನ್ನು ನಿರಾಕರಿಸಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದವರು ಶರಣರು. ಅವರ ಆ ಪ್ರಜ್ಞೆ ಇಂದಿನ ಯುವ ಪೀಳಿಗೆಗೆ ತಲುಪಿಸುವ ಈ ಪ್ರಯತ್ನ ಅನುಕರಣೀಯವಾದುದು ಎಂದರು. 

ಸಾಣೇಹಳ್ಳಿಯ ಅಧ್ಯಾಪಕ ದ್ಯಾಮೇಶ್ ಹೆಚ್ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರಾವಣ ಸಂಜೆ ಕಾರ್ಯಕ್ರಮದ ಉದ್ದೇಶ ಮತ್ತು ರೂಪರೇಷಗಳನ್ನು ತಿಳಿಸಿಕೊಂಡರು. ಕಾರ್ಯಕ್ರಮದ ಆರಂಭದಲ್ಲಿ ಸಾಣೇಹಳ್ಳಿ ಶಿವಸಂಚಾರದ ಹೆಚ್ ಎಸ್ ನಾಗರಾಜ್, ಜ್ಯೋತಿ ಮತ್ತು ಶರಣ್ ತಂಡದವರು ವಚನಗೀತೆ, ಸರ್ವಜ್ಞನ ತ್ರಿಪದಿ, ಭಾವಗೀತೆಗಳನ್ನು ಹಾಡಿದರು. ಅಬಲೂರಿನ ಶ್ರೀ ಬಸವೇಶ್ವರ ಭಜನಾ ಮಂಡಳಿಯವರು ಭಜನೆಗೀತೆಗಳನ್ನು ಹಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.  ಗ್ರಾಮಸ್ಥರಾದ ಜಗದೀಶ್, ಪ್ರವೀಣ್ ತಮ್ಮ ಅನಿಸಿಕೆ ಹಂಚಿಕೊಂಡರು.  

ವೇದಿಕೆಯ ಮೇಲೆ ಚಪ್ಪರದಳ್ಳಿ ಲಿಂಗರಾಜು, ಎಸ್ ಬಿ ತಿಪ್ಪಣ್ಣನವರ್, ಬಿ ಎಸ್ ಪಾಟೀಲ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಮುದಿಗೌಡರ್, ಸದಸ್ಯರಾದ ಸುರಶೇಪ್ಪ ಕುರುವತ್ತೇರ, ಚಂದ್ರಪ್ಪ ಮಡಿವಾಳರ್, ಬಸವಲಿಂಗಪ್ಪ ಮುದಗೋಳ್, ನಾಗಪ್ಪ ಮದಗೊಳ್ ಮುಂತಾದ ಜನಪ್ರತಿನಿಧಿಗಳು, ಹಿರಿಯರು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಮಾಲತೇಶ ನಾಡಿಗೇರ ಸ್ವಾಗತಿಸಿದರು ವೀರೇಶ್ ಗೌಡರ್ ಸರ್ವರಿಗೂ ವಂದಿಸಿದರು. ಪ್ರವೀಣ ಕುರುವತ್ತೇರ ಕಾರ್ಯಕ್ರಮ ನಡೆಸಿಕೊಟ್ಟರು.





No comments:

Post a Comment