Monday, October 10, 2016

sanehalli natakothsava 01-11-2015 to 06-11-2015 all day mng chinthana photos

sanehalli natakothsava 

01-11-2015 1st day morning chinthana photos






sanehalli natakothsava 

02-11-2015 2nd day morning chinthana photos




sanehalli natakothsava 

03-11-2015 3rd day morning chinthana photos



sanehalli natakothsava 

04-11-2015 4th day morning chinthana photos



sanehalli natakothsava 

05-11-2015, 5th day morning chinthana photos




sanehalli natakothsava 

06-11-2015 6st day morning chinthana photos



sanehalli natakothsava 

07-11-2015 7th day morning Natakothsava review photos

Monday, August 15, 2016

ಸಾಣೇಹಳ್ಳಿ; ಸ್ವಾತಂತ್ರ್ಯ ದಿನಾಚರಣೆ 15-08-2016

ಸಾಣೇಹಳ್ಳಿ; ಸ್ವಾತಂತ್ರ್ಯ  ದಿನಾಚರಣೆ 

ಶ್ರೀಮಠದ ಶಾಲಾ ಆವರಣದಲ್ಲಿ 70ನೆಯ ಸ್ವಾತಂತ್ರ್ಯಮಹೋತ್ಸವವನ್ನು ಅತ್ಯಂತ ಸಂಭ್ರಮಸಡಗರದಿಂದ ಆಚರಿಸಲಾಯಿತುನಿವೃತ್ತ ಮುಖ್ಯೋಪಾಧ್ಯಾಯಸ್ಥಳೀಯ ಸಲಹಾ ಸಮಿತಿಯ ಸದಸ್ಯರಾದ ಎಸ್ ಸಿದ್ಧಪ್ಪ  ಧ್ವಜಾರೋಹಣ ನೆರವೇರಿಸಿ ಮಾತನಾಡಿ ಬ್ರಿಟೀಷರಿಗಿಂತ ಮುಂಚೆ ನಮ್ಮ ದೇಶವನ್ನು ಅನೇಕ ಚಿಕ್ಕಪುಟ್ಟ ರಾಜರುಗಳು ತಮ್ಮ ತಮ್ಮ ಶಕ್ತಾನುಸಾರ ಆಳುತ್ತಿದ್ದರುವ್ಯಾಪಾರಕ್ಕೆಂದು ಬಂದ ಬ್ರಿಟೀಷರು ಒಡೆದು ಆಳುವ ನೀತಿಯ ಮೂಲಕ ಇಡೀ ದೇಶವನ್ನು ಕೆಲವೇ ವರ್ಷಗಳಲ್ಲಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರುಅವರ ಆಡಳಿತಾವಧಿಯಲ್ಲಿ ಜನರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಯಿತುಎಲ್ಲೆಲ್ಲೂ ಭಯದ ವಾತಾವರಣವಿತ್ತು.  ಜನಸಾಮಾನ್ಯರು ಮುಕ್ತವಾಗಿ ಹೊರಬರಲು ಹೆದರುತ್ತಿದ್ದರುಇಂಥ ಸಂದರ್ಭದಲ್ಲಿ ಕೆಲ ದೇಶಭಕ್ತರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿದು ತಮ್ಮ ಪ್ರಾಣವನ್ನೇ ಕಳೆದುಕೊಂಡರುಮುಂದೆ ಗಾಂಧೀಜಿಯವರ ನೇತೃತ್ವದಲ್ಲಿ ದೇಶದಾದ್ಯಂತ ಒಮ್ಮೆಲೆ ಚಳುವಳಿಯನ್ನು ಆರಂಭಿಸಿದರುಇದರಿಂದ ಅಸಹಾಯಕರಾದ ಬ್ರಿಟೀಷರು ನಮಗೆ 1947 ಆಗಸ್ಟ್ 15 ರಂದು  ಸ್ವಾತಂತ್ರ್ಯವನ್ನು ನೀಡಿದರುಹೀಗೆ ಸಿಕ್ಕ ಸ್ವಾತಂತ್ರ್ಯ ಇಂದು ಅನೇಕ ವಿಚಾರಗಳಲ್ಲಿ ಸಾರ್ಥಕತೆಯನ್ನು ಪಡೆದಿದೆಆದರೆ ಭ್ರಷ್ಟಾಚಾರ  ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿ ದೇಶ ಹಿನ್ನಡೆಯನ್ನು ಅನುಭವಿಸುವಂತಾಗಿರುವುದು ದುರದೃಷ್ಟಕರ ಸಂಗತಿಇದರ ನಡುವೆಯೂ ಅಟಲ್ ಬಿಹಾರಿ ವಾಜಪೇಯಿಅಬ್ದುಲ್ ಕಲಾಂರಂಥ ಮುತ್ಸದ್ದಿಗಳನ್ನ  ದೇಶ ಕಂಡಿದೆಇಂದಿನ ರಾಜಕಾರಣಿಗಳಿಗೆ ಇಂಥ ಆದರ್ಶವಾದಿಗಳು ಮಾದರಿಯಾಗಬೇಕುಶ್ರೀ ಶಿವಕುಮಾರ ಸ್ವಾಮೀಜಿಶ್ರೀ ಶಿವಮೂರ್ತಿ ಸ್ವಾಮೀಜಿ ಮತ್ತು ಶ್ರೀ ಪಂಡಿತಾರಾಧ್ಯ ಸ್ವಾಮಿಜಿಗಳು ನಡೆಸುತ್ತಿರುವ ಸೇವಾಕ್ಷೇತ್ರಗಳು ಸಮಾಜದ ಮುಖಂಡರಿಗೆ ಮಾದರಿಯಾಗಬೇಕು ಎಂದರು.
ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಲ್ಲಪ್ಪ ಮಾತನಾಡಿ ನಮ್ಮ ದೇಶ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದರೂ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ  ಎಲ್ಲ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡುತ್ತಿಲ್ಲಜನರಲ್ಲಿ ಶಿಕ್ಷಣದ ಮೂಲಕ ಮಾತ್ರ ಜಾಗೃತಿ ಮೂಡಿಸಬಹುದು ಎಂದು ನಂಬಿರುವ ಸರಕಾರಗಳು ಶಿಕ್ಷಣಕ್ಕೆ ಸಾಕಷ್ಟು ಹಣವನ್ನು ಮೀಸಲಿಟ್ಟು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆಜನರಿಗೆ ಸರಕಾರಿ ನೌಕರಿ ಬೇಕುಸೌಲಭ್ಯಗಳು ಬೇಕು ಆದರೆ ಸರಕಾರಿ ಶಾಲೆಗಳಲ್ಲಿ ಶಿಕ್ಷಣಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾತ್ರ ಬೇಡವಾಗಿರುವುದು ವಿಚಿತ್ರ ಸಂಗತಿಯಾಗಿದೆಸ್ವಾತಂತ್ರ್ಯ ಮಹೋತ್ಸವದ ಆಚರಣೆ ಕೇವಲ ಕೆಲವೇ ವರ್ಗದ ನೌಕರರಿಗೆಇಲಾಖೆಗಳಿಗೆ ಮಾತ್ರ ಸೀಮಿತವಾಗಿದೆಪ್ರತಿ ಮನೆ ಮನೆಯಲ್ಲೂ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬಹರಿದಿನಗಳಂತೆ ಆಚರಿಸಬೇಕುಇನ್ನೊಬ್ಬರಿಗೆ ತೊಂದರೆಕೊಡದೆ ತಮ್ಮ ತಮ್ಮ ಕೆಲಸಗಳನ್ನು ಜವಾಬ್ದಾರಿಯಿಂದಆತ್ಮಸಾಕ್ಷಿಗೆ ಅನುಗುಣವಾಗಿ ಮಾಡುವುದೆ  ದೇಶಸೇವೆಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದಿರುವುದುಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ರಂಗಕರ್ಮಿ ಕೆ ಎಸ್ ಡಿ ಎಲ್ ಚಂದ್ರು ಮತ್ತು ರಂಗಶಾಲೆಯ ಪ್ರಾಚಾರ್ಯ ಜಗದೀಶ್ಅಧ್ಯಾಪಕ ಎಸ್  ಷಣ್ಮುಖಪ್ಪವಿದ್ಯಾರ್ಥಿಗಳಾದ ಡಿ ಎಸ್ ಸುಪ್ರಭೆಡಿ ಎಸ್ ಶಿವಸ್ವರೂಪಹೆಚ್ ಕವನಹೆಚ್ ಬಿ ರಕ್ಷಿತಾಸಿ ಆರ್ ಮೇಘಶ್ರೀಚೈತ್ರಶ್ರೀಗ್ರೀಷ್ಮಾ ಸ್ವಾತಂತ್ರ್ಯೋತ್ಸವಅದರ ಮಹತ್ವಜವಾಬ್ದಾರಿಕರ್ತವ್ಯಗಳ ಕುರಿತಂತೆ ಕನ್ನಡಹಿಂದಿಇಂಗ್ಲೀಷಿನಲ್ಲಿ  ಭಾಷಣ ಮಾಡಿದರು.
ವರ್ಷಾಎಸ್ ಜೆ ಲಿಖಿತಡಿ ಸುಪ್ರಿತಾಎಂ ಎಸ್ ದೀಪಾದರ್ಶನ್ಮಂಜುಳಾಎನ್ ಪಿ ಪವಿತ್ರಾರಕ್ಷಿತಾ ಮತ್ತು ಸಂಗಡಿಗರು ದೇಶಭಕ್ತಿಗೀತೆಗಳನ್ನು ಹಾಡಿದರುಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು `ಮಾ ತುಝೆ ಸಲಾಂ’ ಗೀತೆಗೆ ಆಕರ್ಷಕ ಸಾಮೂಹಿಕ ನೃತ್ಯರೂಪಕ ನೀಡಿದರುವದ್ಯಾರ್ಥಿಗಳಾದ ಸಂಜನ ಸ್ವಾಗತಿಸಿದರೆಶರಣ್ ಪಾಟೀಲ್ ವಂದಿಸಿದರುಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.   
ಧ್ವಜಾರೋಹಣಕ್ಕೂ ಮುನ್ನ ಸಾಣೇಹಳ್ಳಿಯ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲ ನಡೆಸಿದರುಗ್ರಾಮಸ್ಥರು ಬೀದಿಗಳನ್ನು ಸ್ವಚ್ಛಗೊಳಿಸಿತಳಿರು ತೋರಣಗಳನ್ನು ಕಟ್ಟಿರಂಗೋಲಿಯಿಟ್ಟು ಮಕ್ಕಳನ್ನು ಸ್ವಾಗತಿಸಿದರುರಂಗಶಾಲೆಶಿವಸಂಚಾರಲೋಕಸಂಚಾರದ ಕಲಾವಿದರುಶಾಲಾ ಕಾಲೇಜಿನ ನೌಕರರುಪೋಷಕರುಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.


















Sunday, August 14, 2016

ಸಾಣೀಹಳ್ಳಿಯಲ್ಲಿ ಸ್ವಚ್ಫತಾ ಅಭಿಯಾನ 14-08-2016

ಸಾಣೇಹಳ್ಳಿಯಲ್ಲಿ ಸ್ವಚ್ಫತಾ ಅಭಿಯಾನ

ಶ್ರೀಮಠದ ಶಾಲೆಯ ಮಕ್ಕಳು ಸ್ವತಂತ್ರ ದಿವಸದ ಮುನ್ನದಿನವಾದ ಇಂದು ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಪ್ರಧಾನಮಂತ್ರಿ ನರೇಂದ್ರಮೋದಿಯವರ ಸ್ವಚ್ಛಭಾರತ ಅಭಿಯಾನದ ಕಲ್ಪನೆ ಹಾಗೂ ಡಾ|| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳವರ ಆಶಯದಂತೆ ಸಾಣೇಹಳ್ಳಿಯ ಬೀದಿಗಳು, ಆಸ್ಪತ್ರೆಯ ಆವರಣ, ಊರ ಹೊರಗಿನ ರಸ್ತೆಗಳ ಇಕ್ಕೆಲಗಳಲ್ಲಿ ಸ್ವಚ್ಛತಾಕಾರ್ಯ ಕೈಗೊಂಡರು. ಶ್ರೀ ಗುರುಪಾದೇಶ್ವರ ಪ್ರಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮಿಜಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಏಳನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ತಲಾ 50 ವಿದ್ಯಾರ್ಥಿಗಳಿಗೊಂದರಂತೆ 14 ತಂಡಗಳನ್ನು ರಚಿಸಲಾಗಿತ್ತು. ಒಂದೊಂದು ತಂಡಕ್ಕೂ ಮೂರು ಜನ ಶಿಕ್ಷಕರು ಮತ್ತು ಒಬ್ಬರು ಗ್ರಾಮಸ್ಥರನ್ನು ನಿಯೋಜಿಸಲಾಗಿತ್ತು. ಮೂರು ಟ್ರ್ಯಾಕ್ಟರ್ ಗಳನ್ನು ಬಳಸಿಕೊಂಡು ಗ್ರಾಮದ ಬೀದಿಗಳ ಇಕ್ಕೆಲಗಳಲ್ಲಿ ಬೆಳೆದಿದ್ದ ಪಾರ್ಥೇನಿಯಂ, ಜಾಲಿ ಮುಂತಾದ ಗಿಡಗಳನ್ನು ಕಿತ್ತು ಹಾಕಲಾಯಿತು. ಪ್ಲಾಸ್ಟಿಕ್, ಕಸ ಮುಂತಾದವು ಸೇರಿದಂತೆ ಸುಮಾರು 7-8 ಟ್ರ್ಯಾಕ್ಟರ್ ಆಯ್ದು ಊರ ಹೊರಗಿನ ದೊಡ್ಡ ಗುಂಡಿಗೆ ಹಾಕಲಾಯಿತು. ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದನ್ನು ಕಂಡ ಗ್ರಾಮಸ್ಥರು ತಾವು ಕೈಜೋಡಿಸಿದ್ದಲ್ಲದೆ ಇನ್ನುಮುಂದೆ ವಿದ್ಯಾರ್ಥಿಗಳು ಬಂದು ಸ್ವಚ್ಛಮಾಡಲು ಅವಕಾಶ ಮಾಡಿಕೊಡದಂತೆ ನಾವೆ ನಮ್ಮ ನಮ್ಮ ಮನೆಯ ಮುಂದಿನ ರಸ್ತೆಗಳನ್ನು ಸ್ವಚ್ಛಮಾಡುವುದಾಗಿ ಹೇಳಿದರು. ಒಟ್ಟಾರೆ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಈ ಅಭಿಯಾನ ಯಶಸ್ವಿಯಾಯಿತು. ಈ ಸ್ವಚ್ಛತಾ ಅಭಿಯಾನದಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಸಾಣೇಹಳ್ಳಿ ಗ್ರಾಮಪಂಚಾಯಿತಿಯ ಸದಸ್ಯರು, ಯುವಕರು, ಹಿರಿಯರು, ಶಾಲಾಕಾಲೇಜುಗಳ ಅಧ್ಯಾಪಕರು, ನೌಕರರು ಭಾಗವಹಿಸಿದ್ದರು.
-     



 

ಸಾಣೀಹಳ್ಳಿ , ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭ 29-07-2016

ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ